ಆಶಾಪೂರ್ಣಾ ದೇವಿ (: আশাপূর্ণা দেবী) (೧೯೦೯-೧೯೯೫) ಇವರು ಬೆಂಗಾಲಿ ಭಾಷೆಯ ಪ್ರಮುಖ ಕಾದಂಬರಿಕಾರ್ತಿ ಮತ್ತು ಕವಯಿತ್ರಿ. == ಸಾಹಿತ್ಯ ಕೃತಿಗಳು == === ತ್ರಿವಳಿ ಕಾದಂಬರಿಗಳು === ತಮ್ಮ ತ್ರಿವಳಿ ಕಾದಂಬರಿಗಳಾದ 'ಪ್ರಥೊಮ್ ಪ್ರತಿಶುತಿ', 'ಸ್ವರ್ಣಲತಾ' ಮತ್ತು 'ಬಕುಲ್ ಕಥಾ' ಮೂಲಕ ೧೨ನೆಯ ಶತಮಾನದ ಮೂರು ತಲೆಮಾರುಗಳ ಬೆಂಗಾಲಿ ಮಹಿಳೆಯರ ಜೀವನ ಚರಿತ್ರೆಯನ್ನು ಚಿತ್ರಿಸಿದ್ದಾರೆ. == ಪ್ರಶಸ್ತಿ/ಗೌರವ/ಸನ್ಮಾನ == ಇವರಿಗೆ ಭಾರತ ಸರಕಾರದ ಪದ್ಮಶ್ರೀ, ವಿಶ್ವಭಾರತಿ ವಿಶ್ವವಿದ್ಯಾನಿಲಯದ ದೇಶಿಕೋತ್ತಮ ಪ್ರಶಸ್ತಿ, ಜಬಲ್ಪುರ್, ರಬೀಂದ್ರ ಭಾರತಿ, ಬರ್ದವಾನ್ ಮತ್ತು ಜಾಧವಪುರ್ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೇಲೋಶಿಪ್ ಮತ್ತು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. == ನಿಧನ == ಇವರು ೧೯೯೫ರಲ್ಲಿ ನಿಧನ ಹೊಂದಿದರು. == == ಆಶಾಪೂರ್ಣಾ ದೇವಿಯವರ ಜೀವನ ಪರಿಚಯ 2007-02-07 ವೇಬ್ಯಾಕ್ ಮೆಷಿನ್ ನಲ್ಲಿ.